ಕಾಂಗ್ರೆಸ್‌ಗೆ ಟಾಂಗ್‌; ಮಂಡ್ಯದಲ್ಲಿ ಜೆಡಿಎಸ್‌ ಸಮಾವೇಶ!

ಜೆಡಿಎಸ್‌ ಭದ್ರಕೋಟೆ ಹಾಸನದಲ್ಲಿ ಕಾಂಗ್ರೆಸ್‌ ಪಕ್ಷ ಅಬ್ಬರದ ಸಮಾವೇಶ ನಡೆಸಿತ್ತು.. ಇದರ ಬೆನ್ನಲ್ಲೇ ಜೆಡಿಎಸ್‌ ಕೂಡಾ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ.. ಅದಕ್ಕೆ ಜೆಡಿಎಸ್‌ ನಾಯಕರು ಆಯ್ಕೆ ಮಾಡಿಕೊಂಡಿರೋದು ಮಂಡ್ಯ ನಗರವನ್ನು.. ಆಡಳಿತ ಪಕ್ಷ ಕಾಂಗ್ರೆಸ್‌ಗೆ ಕೌಂಟರ್‌ ಕೊಡಲೆಂದೇ ಈ ಜೆಡಿಎಸ್‌ ಈ ಸಮಾವೇಶ ಏರ್ಪಡಿಸಿದೆ.. ಡಿಸೆಂಬರ್‌ 15ಕ್ಕೆ ಮಂಡ್ಯದಲ್ಲಿ ಬೃಹತ್‌ ಜೆಡಿಎಸ್‌ ಸಮಾವೇಶ ನಡೆಸೋದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.. ಹೆಸರಿಗೆ ಇದು ಕುಮಾರಸ್ವಾಮಿಗೆ ಅಭಿನಂದನಾ ಕಾರ್ಯಕ್ರಮ.. ಆದ್ರೆ, ನಿಜ ಹೇಳಬೇಕು ಅಂದ್ರೆ ಇದು ಕಾಂಗ್ರೆಸ್‌ ಸಮಾವೇಶಕ್ಕೆ ಟಾಂಗ್‌ ಕೊಡಲು ನಡೆಸುತ್ತಿರುವ ಸಮಾವೇಶ..
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಎರಡು ಲಕ್ಷಕ್ಕೂ ಅಧಿಕ ಬಹುಮತದೊಂದಿಗೆ ಗೆದ್ದಿರುವ ಕುಮಾರಸ್ವಾಮಿ ಕೇಂದ್ರದಲ್ಲಿ ಸಚಿವರಾಗಿದ್ದಾರೆ.. ಹೀಗಾಗಿ ಕುಮಾರಸ್ವಾಮಿಯವರಿಗೆ ಅಭಿನಂದನೆ ತಿಳಿಸುವ ನೆಪದಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ ನಡೆಸಲಾಗುತ್ತಿದೆ.. ಡಿಸೆಂಬರ್‌ 16ಕ್ಕೆ ಕುಮಾರಸ್ವಾಮಿಯವರು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಅದಕ್ಕೂ ಒಂದು ದಿನ ಮುಂಚೆ ಮಂಡ್ಯ ನಗರದ ಸರ್‌ ಎಂವಿ ಕ್ರೀಡಾಂಗಣದಲ್ಲಿ ಬೃಹತ್‌ ಸಮಾವೇಶ ನಡೆಸಲು ಸಿದ್ಧತೆ ನಡೆದಿದೆ.. ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರನ್ನು ಈ ಸಮಾವೇಶದಲ್ಲಿ ಸೇರಿಸಲು ಜೆಡಿಎಸ್‌ ನಾಯಕರು ಚಿಂತನೆ ನಡೆಸಿದ್ದಾರೆ.. ಚನ್ನಪಟ್ಟಣ ಸೋಲಿನಿಂದಾಗಿ ಜೆಡಿಎಸ್‌ ಕಾರ್ಯಕರ್ತರು ಹತಾಶರಾಗಿದ್ದಾರೆ.. ಹೀಗಾಗಿ ಅವರನ್ನು ಹುರಿದುಂಬಿಸೋದು, ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುವ ಉದ್ದೇಶವೇ ಈ ಸಮಾವೇಶವಾಗಿದೆ..
ಕುಮಾರಸ್ವಾಮಿಯವ್ರ ಅಭಿನಂದನಾ ಸಮಾರಂಭ ಎಂದು ಹೆಸರಿಟ್ಟುಕೊಂಡು ಜೆಡಿಎಸ್‌ ಕಾರ್ಯಕರ್ತರಲ್ಲದೆ, ಬಿಜೆಪಿ ಕಾರ್ಯಕರ್ತರು, ನಾಯಕರನ್ನು ಕೂಡಾ ಈ ಸಮಾವೇಶಕ್ಕೆ ಕರೆತರಲು ಚಿಂತನೆ ಮಾಡಲಾಗಿದೆ.. ಆ ಮೂಲಕ ಹಳೇ ಮೈಸೂರು ಭಾಗದಲ್ಲಿ ಮೈತ್ರಿ ಪ್ರಾಬಲ್ಯ ಕುಗ್ಗದಂತೆ ನೋಡಿಕೊಳ್ಳುವುದು ಜೆಡಿಎಸ್ ಉದ್ದೇಶ ಎನ್ನಲಾಗಿದೆ. ಈ ಸಮಾವೇಶದ ನೇತೃತ್ವವನ್ನು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ವಹಿಸಿಕೊಂಡಿದ್ದಾರೆ.. ಈಗಾಗಲೇ ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ಕೂಡಾ ಮಾಡಿದ್ದಾರೆ.. ಮಾಜಿ ಶಾಸಕರಾದ ಅನ್ನದಾನಿ, ಜೆಡಿಎಸ್‌ ಮಂಡ್ಯ ಜಿಲ್ಲಾಧ್ಯಕ್ಷ ಡಿ.ರಮೇಶ್ ಕೂಡಾ ಮಾಜಿ ಸಚಿವ ಪುಟ್ಟರಾಜುಗೆ ಸಾಥ್ ನೀಡಿದ್ದಾರೆ. ಇನ್ನು ಇದೇ ವೇಳೆ ಮಾತನಾಡಿರುವ ಮಾಜಿ ಸಚಿವ ಸಿಎಸ್‌ ಪುಟ್ಟರಾಜು, ರಾಜ್ಯ ರಾಜಕೀಯದಲ್ಲಿ ಭೂಕಂಪ ಸಂಭವಿಸಲಿದ್ದು, ಕೆಲವೇ ದಿನಗಳಲ್ಲಿ ಕಾಂಗ್ರೆಸ್‌ ಸರ್ಕಾರವೇ ಬದಲಾದರೂ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.. ಕಾಂಗ್ರೆಸ್‌ ಬಣ್ಣ ಕೆಲವೇ ದಿನಗಳಲ್ಲಿ ಬಯಲಾಗಲಿದೆ.. ರಾಜ್ಯ ರಾಜಕೀಯ ದೊಡ್ಡ ಬದಲಾವಣೆಯಾದರೂ ಯಾರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.. ಪುಟ್ಟರಾಜು ಅವರ ಈ ಹೇಳಿಕೆ ಎಲ್ಲರ ಅಚ್ಚರಿಗೆ ಕಾರಣವಾಗಿದೆ..
ಇನ್ನು ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ.ದೇವೇಗೌಡರು ಕುಮಾರಸ್ವಾಮಿ ಹಾಗೂ ದೇವೇಗೌಡರ ವಿರುದ್ಧ ಮುನಿಸಿಕೊಂಡಿದ್ದಾರೆ.. ಹೀಗಾಗಿಯೇ ಅವರು ಚನ್ನಪಟ್ಟಣ ಉಪಚುನಾವಣಾ ಪ್ರಚಾರದಲ್ಲಿ ಭಾಗವಹಿಸಿರಲಿಲ್ಲ.. ಈ ನಡುವೆ, ದೆಹಲಿಯಲ್ಲಿ ದೇವೇಗೌಡರ ಮನೆಯಲ್ಲಿ ಜೆಡಿಎಸ್ ನಾಯಕರು ಸಭೆ ನಡೆದಿದ್ದು, ಇದರಲ್ಲಿ ಜಿ.ಟಿ.ದೇವೇಗೌಡರ ವಿಚಾರ ಚರ್ಚೆಯಾಗಿದೆ ಎಂದು ತಿಳಿದುಬಂದಿದೆ.. ಸಾರಾ ಮಹೇಶ್‌ ಹಾಗೂ ಸಿಎಸ್ ಪುಟ್ಟರಾಜು ಅವರು ದೇವೇಗೌಡರು ಹಾಗೂ ಕುಮಾರಸ್ವಾಮಿಯವರಿಗೆ ಈ ಬಗ್ಗೆ ಮನವರಿಕೆ ಮಾಡಿಕೊಟ್ಟು, ಜಿ.ಟಿ.ದೇವೇಗೌಡರ ಮನವೊಲಿಸುವುದಕ್ಕೆ ಅನುಮತಿ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ..

Leave a Reply

Your email address will not be published. Required fields are marked *